ಶಹಬಾನ್ ಮಹತ್ವ

ನಮಾಝ್ ಪರಿಶೀಲಿಸಲು ಮತ್ತು ತುಂಬು ಹೃದಯದಿಂದ ರಮಳಾನ್‍ನ್ನು ಸ್ವಾಗತಿಸಲು ಹಾಗೂ ಮನಸ್ಸನ್ನು ಮತ್ತು ಶರೀರವನ್ನು ರಮಳಾನಿಗೆ ಸಜ್ಜುಗೂಳಿಸಲು ಬೇಕಾಗಿ ಶಅïಬಾನ್ ತಿಂಗಳು ಓರ್ವ ವಿಶ್ವಾಶಿ ಪಾಲಿಗೆ ಅನಿವಾರ್ಯವಾಗಿದೆ. ಒಳಿತಿಗೆ ಹೆಚ್ಚಾಗಿ ಗಮನ ಕೊಡುತ್ತಾ, ಕೆಡುಕುಗಳಿಂದ ದೂರ ಸರಿದು ಮನಸ್ಸನ್ನು ಶುದ್ದಿಗೂಳಿಸಿ ಸಂಪೂರ್ಣವಾಗಿ ರಮಳಾನನ್ನು ಉಪಯೋಗಿಸಲು ಶಅïಬಾನ್ ತಿಂಗಳು ಸಹಾಯಕವಾಗಿದೆ. ನೆಬಿ (ಸ ಅ) ನಮಾಝ್‍ನ ಎಲ್ಲಾ ರೂಪಕೃತ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸಿದ್ದು ಶಅïಬಾನ್ ತಿಂಗಳಲ್ಲಾಗಿದೆ. ಇಬ್ನ್ ರಜಬ್ ಹೇಳುತ್ತಾರೆ:                         ಶಅïಬಾನ್‍ನ ವೃತ ರಮಳಾನಿನ ವೃತದ ಪೂರ್ವ ತಯಾರಿಯಾಗಿದೆ. ಯಾವುದೇ ಅಡೆತಡೆಗಳಿಲ್ಲದೇ ರಮಳಾನಿನ ವೃತ ಅನುಷ್ಠಿಸಲು ಇದರ ಮುಖೇನ ಸಾದ್ಯವಿದೆ. (ಲತ್ವಾಹಿಫ್ ಮಹಾರಿಫ್) “ಶಅಬಾನಿನ ಅರ್ಧದಲ್ಲಿ ವೃತ ಅನುಷ್ಠಿಸಿರಿ” ಎಂಬ ತುರ್ಮುದಿ ಮತ್ತು ಅಬೂ ದಾವೂದ್ ರವರ ಹದೀಸಿನ ವೀಕ್ಷಣೆಯಲ್ಲಿ ಶಅïಬಾನ್‍ನ ಅರ್ಧದ ನಂತರ ವೃತ ಅನುಷ್ಠನೆಯ ವಿರೋಧವು ಶಾಫಿಈ ಮದ್‍ಹಬ್‍ನಲ್ಲಿವೆ.                                                                                                                  ಆದರೆ ರಮಳಾನಿನ ವ್ರತ ವಿರೋಧವು ಶಾಫಿಈ ಮದ್‍ಹಬ್‍ನಲ್ಲಿವೆ. ಆದರೆ ರಮಳಾನಿನ ವ್ರತ ಶರೀರಕ್ಕೆ ಕ್ಷೀಣ ಮತ್ತು ಪ್ರಯಾಸವನ್ನುಂಟುಮಾಡುವುದಾದರೆ ಶಅïಬಾನ್‍ನ ವೃತ ಬೇಡವೆಂಬುದು ಪ್ರಬಲ ಅಬಿಪ್ರಾಯ. ಶಅಬಾನನ್ನು ಮುಸ್ಲಿಂ ಉಮ್ಮತಿಗೆ ದಾನವಾಗಿ ನೀಡಿದ ರಮಳಾನಿನ ಪೂರ್ವಸಿದ್ದತೆಯಾಗಿ ಕಾಣಬೇಕು .                                      ನೆಬಿ()ಹೇಳಿದನ್ನು ಮುಹಮ್ಮದ್‍ಬ್ನ್ ಶರೀರಕ್ಕೆ ಕ್ಷೀಣ ಮತ್ತು ಪ್ರಯಾಸವನ್ನುಂಟುಮಾಡುವುದಾದರೆ ಶಅïಬಾನ್‍ನ ವೃತ ಬೇಡವೆಂಬುದು ಪ್ರಬಲ ಅಬಿಪ್ರಾಯ. ಶಅಬಾನನ್ನು ಮುಸ್ಲಿಂ ಉಮ್ಮತಿಗೆ ದಾನವಾಗಿ ನೀಡಿದ ರಮಳಾನಿನ ಪೂರ್ವಸಿದ್ದತೆಯಾಗಿ ಕಾಣಬೇಕು .                                                                                                        ನೆಬಿ()ಹೇಳಿದನ್ನು ಮುಹಮ್ಮದ್‍ಬ್ನ್ ಮಸ್ಲಮತ್ತ್() ಹೇಳುತ್ತಾರೆ: ನಿಮ್ಮ ಒಂದೊಂದು ದಿವಸದಲ್ಲೂ ಅಲ್ಲಾಹನ ರಹ್ಮತಿನ ಪಾಲು ಇದೆ. ಅದನ್ನು ಕೈಲಾಗಿಸಲು ಶ್ರಮಿಸಿರಿ. ಅಲ್ಲಾಹನ ರಹ್ಮತಿನ ಸಣ್ಣ ಒಂದು ಪಾಲು ಲಬಿಸಿದರೆ, ಆತನಿಗೆ ಸೋಲು ಎಂಬುದೇ ಇಲ್ಲ. ಅಲ್ಲಾಹನ ರಹ್ಮತನ್ನು ಉದಾರವಾಗಿ ನೀಡುವ ರಮಳಾನ್ ದಿನಗಳಿಗೆ ತಯಾರಾಗಿ ನಿಲ್ಲಲು ಈ ಹದೀಸ್ ಸೂಚಿಸುತ್ತದೆ. ಆ ತಯಾರು ಶಅಬಾನಿನಲ್ಲಾಗಿದೆ. ಅನಸ್()ರವರು ನೆಬಿ()ರೊಂದಿಗೆ ಕೇಳಾಯಿತು: ರಮಳಾನ್ ನಂತರ ಮಹತ್ವವಿರುವ ವೃತ ಯಾವುದು? ನೆಬಿ()ರು ಉತ್ತರಿಸಿದರು.                                                                            ರಮಳಾನ್ ಆದರಿಸಿ ಶಅïಬಾನ್‍ನಲ್ಲಿ ಅನಿಷ್ಠಿಸುವ ವೃತವಾಗಿದೆ. ಸ್ವಹಾಬಿಗಳು ಶಅïಬಾನ್ ಆಗಮಿಸಿದಾಗ ತಮ್ಮೆಲ್ಲಾ ವ್ಯಾಪಾರಗಳನ್ನು ನಿಲ್ಲಿಸಿ ಖುರ್‍ಅನ್ ಪಾರಾಯಣ ಮುಂತಾದ ಸತ್ಕರ್ಮಗಳಲ್ಲಿ ಮುಳುಗುತ್ತಿದ್ದರು. ಹೇರಳವಾಗಿ ದಾನ ನೀಡುತ್ತಾ, ಖುರ್‍ಆನ್ ಅರ್ಥಚಿಂತಿಸಿ ಓದುತಿದ್ದರು.                                                                                          ಉಸಾಮತುಬ್ನ್ ಸೈದ್ ()ಹೇಳುತ್ತಾರೆ: ನಾನು ನೆಬಿ()ರೊಂದಿಗೆ ಕೇಳಿದೆ; ನೆಬಿಯವರೇ ತಾವು ಶಅïಬಾನ್ ನಲ್ಲಿ ವೃತ ಅನುಷ್ಠಿಸುವಂತೆ ಮತ್ಯಾವ ತಿಂಗಳಲ್ಲಿ ಇಲ್ಲಾವಲ್ಲ?                                                                                ನೆಬಿ()ಉತ್ತರಿಸಿದರು: ರಜಬ್ ಮತ್ತು ರಮಳಾನ್‍ನ ಮದ್ಯ ತಿಂಗಳಾಗಿವೆ ಶಅïಬಾನ್. ಹಲವು ಜನ ಆ ತಿಂಗಳ ಮಹತ್ವದವನ್ನು ತಿಳಿದಿಲ್ಲ. ಅಲ್ಲಾಹನ ಬಳಿ ಸತ್ಕರ್ಮಗಳನ್ನು ಮೇಲಕ್ಕೆತ್ತುವ ತಿಂಗಳಾಗಿವೆ.                                                                      ವೃತಗಾರನಾಗಿ ನನ್ನ ಸತ್ಕರ್ಮಗಳನ್ನು ಮೇಲೆತ್ತಲು ಆ ತಿಂಗಳಲ್ಲಿ ಆಗ್ರಹಿಸುವೆ. ಶಅïಬಾನ್ ತಿಂಗಳಾರ್ಧ(ಬರಾಅತ್ ರಾತ್ರಿ)ಯನ್ನುದ್ದೇಶಿಸಿ ಪವಿತ್ರ ಖುರ್‍ಆನ್‍ನಲ್ಲಿ ಹಲವಡೆ ಸೂಚನೆಗಳನ್ನು ಕಾಣಬಹುದು “ ಆ ಪವಿತ್ರ ರಾತ್ರಿಗೆ ಲೈಲತುಲ್ ಮುಬಾರಕ(ಸಮೃದ್ದಿ ಭರಿತ ರಾತ್ರಿ), ಲೈಲತುಲ್ ರಹ್ಮತ್’ ಎಂಬ ಹೆಸರಿದೆ ಎಂಬುದನ್ನು ಇಮಾಂ ಇಸ್ಮಾಯಿಲ್ ಹಿಖ್ಖೀ()ತನ್ನ ತಫ್ಸೀರ್ ರೂಹುಲ್ ಬಯಾನ್ ನಲ್ಲಿ ವಿವರಿಸಿದ್ದಾರೆ.                                                                                                   ಬರಾಅತ್ ರಾತ್ರಿ ಐದು ಸವಿಶೇಷತೆಗಳನ್ನು ಹೊಂದಿದೆ. ಬರಾಅತ್ ರಾತ್ರಿಯ ಸವಿಶೇಷತೆಯನ್ನು ಇಮಾಂ  ರಾಝೀ()ವಿವರಿಸುತ್ತಾರೆ.                                                                                                                                     1 ತಂತ್ರ ಪೂರ್ವಕವಾದ ಎಲ್ಲಾಕಾರ್ಯಗಳನ್ನು ಅಂದು ತಿರ್ಮಾನಿಸಲಾಗುವುದು.                                                           2 ಬರಾಅತ್ ರಾತ್ರಿಯ ಆರಾಧನೆಯು ಪ್ರತೇಕ ಶ್ರೇಷ್ಠತೆಯುಳ್ಳದಾಗಿದೆ.                                                                         3 ಪ್ರಸ್ತುತ ರಾತ್ರಿ ಅಲ್ಲಾಹನ ಅನುಗ್ರಹವು ವರ್ಷಿಸಲಾರಂಭಿಸುತ್ತದೆ.                                                                                4 ಪಾಪ ಮುಕ್ತಿ ದೊರೆಯತ್ತದೆ.                                                                                                                               5 ಪ್ರವಾದಿ()ರವರಿಗೆ ಶಿಫಾರಸ್ಸಿನ ಪೂರ್ಣಧಿಕಾರವನ್ನು ನೀಡಲಾಗಿದ್ದು ಇದೇ ರಾತ್ರಿಯಲ್ಲಾಗಿತ್ತು. ಶಅïಬಾನ್‍ನ ಹದಿಮೂರನೇ ರಾತ್ರಿ ತಮ್ಮ ಉಮ್ಮತ್‍ಗೆ ಶಿಫಾರಸ್ಸು(ಶಫಾಅತ್) ಮಾಡುವ ಅಧಿಕಾರವನ್ನು ಪ್ರವಾದಿ()ರವರು ಅಲ್ಲಾಹನಲ್ಲಿ ಕೇಳಿದ್ದರು. ಆಗ ಅಲ್ಲಾಹನು ಮೂರರಲ್ಲೊಂದು ಭಾಗವನ್ನು ನೀಡಿದನು.                                                                ನಂತರ ಹದಿನಾಲ್ಕನೇ ರಾತ್ರಿಯೂ ಕೇಳಿದಾಗ ಮೂರರಲ್ಲಿ ಎರಡಂಶವನ್ನು ನೀಡಿದನು. ಮತ್ತೇ ಹದಿನೈದನೇ ರಾತ್ರಿಯಲ್ಲೂ ಅಲ್ಲಾಹನಲ್ಲಿ ಈ ಬಗ್ಗೆ ಕೇಳಿದಾಗ ಶಿಫಾರಸ್ಸಿನ ಸರ್ವಾಧಿಕಾರವನ್ನು ನೀಡಿ ಬಿಟ್ಟನು.                                                             ಪವಿತ್ರ ಖುರ್‍ಆನ್‍ನಲ್ಲಿ ಅಲ್ಲಾಹನು ಹೇಳುತ್ತಾನೆ: ಖಂಡಿತವಾಗಿಯೂ ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ. ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗಿದೆ. (ಸೂರತು ದುಖ್ಖಾನ್ 3-4) ಮೇಲಿನ ಸೂಕ್ತವನ್ನು ವಿವರಿಸುತ್ತಾ ಪ್ರಸಿದ್ದ ಖುರ್‍ಆನ್ ವ್ಯಾಖ್ಯಾನಕಾರರಾದ ಇಮಾಂ ರಾಝೀ ()ರವರು ಹೇಳಿದ್ದಾರೆ. ಪ್ರಸ್ತುತ ಅನಗ್ರಹೀತ ರಾತ್ರಿ ಬರಾಅತ್ ರಾತ್ರಿ ಆಗಿದೆಯೆಂದು ಇಕ್ರೀಮ()ಮತ್ತು ಒಂದು ವಿಭಾಗ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಮೇಲಿನ ದುಖಾನ್ ಸೂರತ್ತ್‍ನ ನಾಲ್ಕನೇ ಸೂಕ್ತವನ್ನು ಉಲ್ಲೇಖಿಸಿ ಇಮಾಂ ಖುರ್ತುಬಿ() ಉಲ್ಲೇಖಿಸಿದ್ದಾರೆ: ಸ್ವಹಾಬಿವರ್ಯರಾದ ಇಕ್ರೀಮ() ಹೇಳುತ್ತಾರೆ. ಪ್ರಸ್ತುತ ಅನುಗ್ರಹಿತ ರಾತ್ರಿ ಶಅïಬಾನಿನ ಅರ್ಧದ ರಾತ್ರಿಯಾಗಿದೆ. ರಾತ್ರಿ ಒಂದು ವರ್ಷಗಳವರೆಗಿನ ಸಕಲ ಕಾರ್ಯಗಳನ್ನು ತಿರ್ಮಾನಿಸಲಾಗುತ್ತದೆ. ಜೀವಂತವಿರುವವರನ್ನು ಮೃತರಿಂದ ಬೇರ್ಪಡಿಸಿ ಪಟ್ಟಿ ತಯಾರಿಸಲಾಗುವುದು. ಯಾರೆಲ್ಲಾ ಹಜ್ಜ್‍ಕರ್ಮ ನಿರ್ವಹಿಸುವವರು ಎಂದು ದಾಖಲಿಸಲಾಗುತ್ತದೆ ಪ್ರಸ್ತುತ ದಾಖಲೆಗಿಂತ ಒಬ್ಬರನ್ನು ಅಧಿಕಗೂಳಿಸುವ ಅಥವಾ ಕಡಿತಗೂಳಿಸುವ ಸ್ಥಿತಿಯುಂಟಾಗದು.                                               ಉಸ್ಮಾನುಬ್ನ್ ಮುಗಿರತ್()ರವರು ವರದಿ ಮಾಡುತ್ತಾ ಹೇಳುತ್ತಾರೆ. ಪ್ರವಾದಿ()ರು ಹೇಳಿದರು. ಒಂದು ಶಅïಬಾನಿನಿಂದ ಮುಂದಿನ ಶಅïಬಾನ್‍ನವರೆಗಿರುವ ಕಾಲದ ಅಯುಷ್ಯವನ್ನು ನಿಖರವಾಗಿ ತೀರ್ಮಾನಿಸಲಾಗುತ್ತದೆ. ಒಬ್ಬ ವ್ಯಕ್ತಿ ವಿವಾಹಿತನಾಗಿ ಸಂತಾನವನ್ನು ಹೊಂದುತ್ತಾನೆ. ಆದರೆ ಅವನ ಹೆಸರು ಮೃತರ ಪಟ್ಟಿಯಲ್ಲಿ ಸೇರಿರುತ್ತದೆ (ತಫ್ಸಿರುಲ್ ಖುರ್ತುಬಿ16/126).
   ಮನುಷ್ಯರ ಆಯುಷ್ಯ,ಆಹಾರ, ಸೋಲು ಗೆಲುವೂ ಈ ರಾತ್ರಿಯಲ್ಲಿ ನಿರ್ದಾರವಾಗುತ್ತದೆ. ಯುಕ್ತಿಪೂರ್ಣವಾದ ವಿಚಾರಗಳನ್ನು ನಿರ್ಧರಿಸಲಾಗುತ್ತದೆ ಎಂದು ಖುರ್‍ಆನ್‍ನಲ್ಲಿ ಅಲ್ಲಾಹನು ಹೇಳಿದ್ದು ಇಮಾಂ ರಾಝೀ ಉಲ್ಲೇಖಿಸುತ್ತಾರೆ. ಪ್ರತಿಯೋರ್ವನಿಗೂ ಅಲ್ಲಾಹನು ನಿರ್ದರಿಸಿದ ಆಯುಸ್ಸು, ಆಹಾರ, ನೀರು ಇತ್ಯಾದಿಗಳು ಒಂದೇ ಅಳತೆಯಲ್ಲಲ್ಲ. ಅವರ ಸೋಲುಗೆಲುವುಗಳು ಕೂಡಾ ಹಾಗೆನೇ. ಈ ಶೈಲಿಯನ್ನು ಸ್ವೀಕರಿಸಿದ್ದರ ಹಿಂದಿರುವುದು ಅಲ್ಲಾಹನ ಯುಕ್ತಿಯಾಗಿದೆ. ಇದರಿಂದಾಗಿ ‘ಹಕೀಮ್’ ಎಂಬ ಅಲ್ಲಾಹನ ವಿಶೇಷತೆಯನ್ನುಅಲಂಕಾರಿಕವಾಗಿ ಪ್ರಯೋಗಿಸಿ ‘ಅಮ್ರ್ ಹಕೀಮ್’ ಎಂದು ಹೇಳಲಾಯಿತು.                                                                                                                                                ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳೂ ಅವನ ಇಚ್ಚೆಯಂತೆ ನಡೆಯುತ್ತದೆ. ಅವನ ವಿಧಿಯೆದುರಿಗೆ  ಏನೊಂದು ನಡೆಯಲಾರದೆಂದು ನಂಬಿಕೆ ಇರಿಸಿದವರಾಗಿದ್ದಾರೆಮುಸ್ಲಿಮರು. ಆ ಪ್ರಸ್ತುತ ರಾತ್ರಿಯ ಮಹತ್ವ ಮತ್ತು ಆ ರಾತ್ರಿಯಲ್ಲಿಲಭಿಸುವ ಪಾಪಮೋಚನೆ ಕುರಿತು ಧಾರಾಳ ವಚನಗಳಿವೆ. ಮಹಾತ್ಮರಾದ ಮುಅದ್ ಬ್ನ್ ಜಬಲ್ () ನಿವೇದನೆ: ಪುಣ್ಯ ರಸೂಲರು ಹೇಳುತ್ತಾರೆ ಶಅïಬಾನ್‍ನ ಅರ್ಧದ ರಾತ್ರಿಯಲ್ಲಿ ಅಲ್ಲಾಹನ ಅನುಗ್ರಹವು ಪೂರ್ತಿಯೂ ಸೃಷ್ಠಿಗಳ ಮೇಲಿರುತ್ತದೆ.
ಎಲ್ಲಾ ಸೃಷ್ಠಿಗಳ ಪಾಪವನ್ನು ಮಣ್ಣಿಸುವನು. ಅವಿಶ್ವಾಸಿ ಮತ್ತು ಮುಸ್ಲಿಮನೊಂದಿಗೆ ಮುನಿಸಿದವನನ್ನು ಹೊರತುಪಡಿಸಿ.(ಇಬ್ನ್ ಹಿಬ್ಬಾನ್, ಬೈಹಕಿ, ತ್ವಬ್‍ರಾನಿ). ಇಬ್ನ್ ಉಮರ್ ()ಹೇಳುತ್ತಾರೆ. ಐದು ರಾತ್ರಿಯ ಪಾರ್ಥನೆಗಳನ್ನು ಸ್ವೀಕರಿಸದೆ ಇರಲಾರ ಶುಕ್ರವಾರ ರಾತ್ರಿ, ರಜಭ್ ಮೊದಲ ರಾತ್ರಿ, ಶಅïಬಾನ್ ಹದಿನೈದನೇರಾತ್ರಿ(ಬರಾಆತ್ ರಾತ್ರಿ), ಲೈಲತುಲ್ ಖದರ್, ಎರಡು ಪೆರ್ನಾಲ್ ರಾತ್ರಿ. ಬರಾಅತ್ ರಾತ್ರಿ ಪ್ರತೇಕ ದುಆಗಳು ನಿರ್ದೇಶಿಸಲ್ಪಟ್ಟಿವೆ. ಕೂಟವಾಗಿಯೂ, ಒಬ್ಬಂಟಿಯಾಗಿಯೂ ದುಆಗಳನ್ನು ನಿರ್ವಹಿಸುವಂತೆ ಹಲವು ಪ್ರಧಾನ ವಿದ್ವಾಂಸರು ಉಪದೇಶಿಸಿದ್ದಾರೆ. ಶೈಖ್ ಜೀಲಾನಿ(), ಅಬ್ದಿಲ್ಲಾಹಿಬ್ನ್ ಬಾಅಲವಿ(), ಅಲ್ಲಾಮ ಅಸಯ್ಯಿದ್ ಹಸನ್ ಹದ್ದಾದ್()ಮುಂತಾದವರು ಅವರಲ್ಲಿ ಪ್ರಮುಖರು. ಪ್ರಸ್ತುತ ದುಆಗಳ ಮುಂಚಿತವಾಗಿ ಮಗ್ರಿಬ್ ನಂತರ ಮೂರು ಯಾಸೀನ್ ಓದಾಬೇಕು. ದೀರ್ಘಾಯುಷ್ಯಕ್ಕೆ ಬೇಕಾಗಿ, ಭಕ್ಷ್ಯ ಹಾಗೂ ಇತರವಸ್ತುಗಳಲ್ಲಿ ಬರಕತ್ತುಂಟಾಗಲು, ಕೊನೆಗಳಿಗೆಯಲ್ಲಿ ಈಮಾನ್ ರಕ್ಷೆ ಹೊಂzಲು ಎಂಬೆಲ್ಲಾ ಉದ್ದೇಶವನಿಟ್ಟು ಯಾಸೀನ್ ಒದಬೇಕು. ಅದಲ್ಲದೇ ಸೂರತ್ ದುಖಾನ್ ಓದಲು ಮತ್ತು ನೂರು ರಕಅತ್ ನಮಾಝ್ ನಿರ್ವಹಿಸಲು ಮತ್ತು ಅದರ ಬೆಳಗ್ಗೆ ಉಪವಾಸ ಕೈಗೂಳ್ಳಲು ಪ್ರತ್ಯೇಕ ನಿರ್ದೆಶನವಿದೆ. ಇಮಾಂ ರಾಝೀ() ತಮ್ಮ ತಫ್ಸೀರುಲ್ ಕಬೀರ್ನಲ್ಲಿ ಹೇಳುತಾರೆ. “ಯಾರಾದರು ಬರಾಅತ್ ರಾತ್ರಿ ನೂರು ರಕಅತ್ ನಮಾಝು ಮಾಡಿದರೆ ಅವನ ಬಳಿ ನೂರು ಮಲಕ್‍ಗಳನ್ನು  ಅಲ್ಲಾಹನು ಕಳುಹಿಸುವನು.                                                                                                                                                         ಆ ಪೈಕಿ ಮುವ್ವತ್ತು ಮಲಕುಗಳು ಅವನಿಗೆ ಸ್ವರ್ಗದ ಶುಭವಾರ್ತೆ ನೀಡುವರು. ಮುವ್ವತ್ತು ಮಲಕುಗಳು ಅವನಿಗೆ ನರಕದಿಂದ ಅಭಯ ನೀಡುವರು. ಮುವ್ವತ್ತು ಮಲಕುಗಳು ಐಹಿಕ ಬದುಕಿನ ಅಪತ್ತುಗಳನ್ನು ಅವನಿಂದ ದೂರೀಕರಿಸುವರು.
ಹತ್ತು ಮಲಕುಗಳು ಶೈತಾನನ ವಂಚನೆಗಳಿಂದ ಅವನನ್ನು ತಡೆಯುವರು”. ಅಲೀ()ರಿಂದ ನಿವೇದನೆ; ನೆಬಿ() ಹೇಳುತ್ತಾರೆ: ಶಅಬಾನಿನ 15ನೇ ರಾತ್ರಿ ನೀವು ನಮಾಝ್ ನಿರ್ವಹಿಸಿರಿ, ಅದರ ಬೆಳಗ್ಗೆ ವೃತ ಅನಿಷ್ಠಿಸಿರಿ, ಆ ರಾತ್ರಿ ಅಲ್ಲಾಹನ ರಹ್ಮತಿನ ಮಲಕ್ ಭೂಮಿಗೆ ಇಳಿದು ಬರುತ್ತಾರೆ. “ಯಾರಾದರು ಪಾಪಮೋಚನೆ ಕೇಳುವಿರಾ ಅವರಿಗೆ ಮನ್ನಿಸಿ ಕೊಡುವೆನು, ಆರೋಗ್ಯ ಬೇಡಿದವನಿಗೆ ಪರಮಾರೋಗ್ಯ ಕೊಡುವೆನು, ಯಾವುದ್ದನ್ನು ಬೇಡಿದರೂ ಕೊಡುವೆನು”. ಹೀಗೆ ಪ್ರಬಾತದವರೆಗೆ ಕರೆದು ಕೂಗುತ್ತಾ ಇರುವರು (ಇಬ್ನ್ ಮಾಜಾ, ಮಿಶ್ಕಾತ್ , ಮಿರ್ಕಾತ್177/78). ಇಬ್ನ್ ಮಾಜಾ() ರವರು ನಿವೇದನೆ ಮಾಡಿದ ಹದೀಸಿನನುಸಾರ ಆ ದಿವಸ ಬೆಳಗ್ಗೆ ವೃತ ಅನುಷ್ಠಾನ ಇದೆಯಾ? ಎಂಬ ಪ್ರಶ್ನೆಗೆ ಇಮಾಂ ರಂಲೀ()ಕೊಟ್ಟ ಉತ್ತರ, ಶಅïಬಾನ್15ರಂದು ವೃತ ಸುನ್ನತ್ತಾಗಿದೆ (ಫತಾವ ರಂಲಿ, ಫತಾವಲ್ ಕುಬ್‍ರಾ 2/79). ಬರಾಅತ್ ರಾತ್ರಿಗೆ ಮಹತ್ವವಿದೆ.                                                                                                                                                                  ರಾತ್ರಿಗೆ ಪ್ರತೇಕ ಪಾಪವಿಮೋಚನೆ, ದುಆಗೆ ಪ್ರತ್ಯೇಕ ಉತ್ತರ ಲಭಿಸುತ್ತದೆ. ಆದ್ದರಿಂದಲೇ ಇಮಾಂ ಶಾಫೀ() ರಾತ್ರಿಗೆ ಪ್ರತೇಕ ಉತ್ತರ ಲಭಿಸಲಿದೆ ಎಂದು ಹೇಳಲು ಕಾರಣ(ಫತಾವಲ್ ಕುಬ್‍ರಾ 2/80)  ಪ್ರಸ್ತುತ ರಾತ್ರಿ ಧಾರಾಳ ಒಳಿತನ್ನು ಹೆಚ್ಚಿಸಿಸಜೀವಗೊಳಿಸಬೇಕಾಗಿ ಧಾರಾಳ ಹದೀಸ್‍ಗಳಲ್ಲಿವೆ(ಇತ್ಹಾಫ್ 3/45) ಮುಅದ್‍ಬ್ನ್ ಜಬಲ್()ರಿಂದ ನಿವೇದನೆ. ನೆಬಿ()ರು ಹೇಳಿದರು. ಒಬ್ಬ ಐದು ರಾತ್ರಿಗಳಲ್ಲಿ ಸತ್ಕರ್ಮಗಳಿಂದ ಸಜೀವಗೂಳಿಸಿದರೆ ಅತನಿಗೆ ಸ್ವರ್ಗ ಖಡ್ಡಾಯವಾಗಿದೆ. ದುಲ್ಹಜ್ಜ್ 8, ಅರಫಾ, ಬಕ್ರೀದ್, ರಂಝಾನ್, ಶಅಬಾನ್ ಹದಿನೈದು ಇಂತಹ ರಾತ್ರಿಯಾಗಿದೆ. (ಅತ್ತರ್‍ಗೀಬ್, ಕನ್‍ಝುನ್ನಜಾಹ್55).                                                                                                                                                         ಆ ತಿಂಗಳು ಪುಣ್ಯರಸೂಲ()ರ ಮೇಲೆ ಸ್ವಲಾತ್ ಹೇಳಲು ನಿರ್ದೇಶಿಸಿದ ಖುರ್‍ಆನ್ ವಚನ, ಆದ್ದರಿಂದ ಆ ತಿಂಗಳು ಅಧಿಕ ಸ್ವಲಾತ್ ಹೇಳಲು ಉಪಯೋಗಕರವಾಗಿದೆ. “ಶಅಬಾನ್ ನನ್ನ ತಿಂಗಳಾಗಿದೆ”ಎಂದು ಪ್ರವಾದಿಯವರು ಹೇಳಿದ್ದ ಶಅಬಾನಿನ ಮಹತ್ವವನ್ನು ವರ್ಧಿಸುತ್ತದೆ.
                                                                                                 ಮುಹಮ್ಮದ್ ಹರ್ಷದ್ ಕಳಾಯಿ,

Comments

Popular posts from this blog

"ಪ್ರಭಾಕರ್ ಮೈ ಮುಟ್ಟಿದರೆ ಜಾಗ್ರತೆ..." ಸವಾಲೆಸೆದ ಅಮಾಯಕ ಬಶೀರ್ ಇನ್ನಿಲ್ಲ

ಮೊಸಗಾರನಿಗೆ ತಿಳಿದ ಪಾಠ