Posts

Showing posts from January, 2018

ಮೊಸಗಾರನಿಗೆ ತಿಳಿದ ಪಾಠ

Super stroy.... ಒಂದು ಹಳ್ಳಿಯಲ್ಲಿ ಒಬ್ಬ ಹಾಲು ಮಾರುವ ಕಸಬನ್ನು ಮಾಡುತಿದ್ದ, ಹಾಲು,ಮೊಸರು ಮತ್ತು ತುಪ್ಪವನ್ನು ಮಾರಾಟ ಮಾಡಿ ತನ್ನ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ. ಸ್ವಲ್ಪ ಹಾಲನ್ನು ಊರಿನಲ್ಲೇ ಮಾರಿ ಇನ್ನು ಸ್ವಲ್ಪ ಹಾಲಿನಿಂದ ತುಪ್ಪ ಮಾಡಿ ವಾರಕ್ಕೆ ಒಮ್ಮೆ ಮಾರ್ಕೆಟ್ ಗೆ ಹೋಗಿ ಮಾರುತ್ತಿದ್ದ. ಹೆಂಡತಿ ತುಪ್ಪವನ್ನು ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು, ಒಂದು kg ಬ್ಯಾಗ್ ಗಳಾಗಿ ಮಾಡಿ ಕೊಡುತ್ತಿದ್ದಳು. ಒಂದು ದಿನ ಮಾರ್ಕೆಟ್ ಗೆ ಹೋಗಿ ದಿನನಿತ್ಯ ಮಾರುವ ಅಂಗಡಿಯವನಿಗೆ ಕೊಟ್ಟು ತನಗೆ ಬೇಕಾದ ಉಪ್ಪು,ಸಕ್ಕರೆ,ಅಕ್ಕಿ ಮತ್ತು ಇತ್ಯಾದಿ ಸಾಮಗ್ರಿಯನ್ನು ಕೊಂಡು ಮನೆಗೆ ಹೊರಟ. ಆಗ ಅಂಗಡಿ ಮಾಲೀಕನು ತುಪ್ಪವನ್ನು ಎತ್ತಿಡುವಾಗ ಹೀಗೆ ಒಂದು ಬ್ಯಾಗ್ ಅನ್ನು ತೂಕ ಮಾಡಿ ನೋಡುವ ಅಂದುಕೊಂಡು ತೂಕ ಮಾಡಿದಾಗ ಅವನಿಗೆ ಆಶ್ಚರ್ಯವಾಯಿತು ಅದು 1kg ಅಲ್ಲ ಕೇವಲ 900gm ಇತ್ತು. ಮಾಲೀಕನು ಎಲ್ಲಾ ತೂಕ ಮಾಡಿದಾಗ ಅವನಿಗೆ ಎಲ್ಲಾ ಬ್ಯಾಗುಗಳು 900gm ಸಿಕ್ಕಿತು.ಮಾಲೀಕನಿಗೆ ಮನಸ್ಸಿಗೆ ತುಂಬ ನೋವಾಯಿತು. ಇವನ ಮೇಲೆ ಇಟ್ಟ ನಂಬಿಕೆಗೆ, ಇವನು ನನಗೆ ಮೋಸ ಮಾಡುತ್ತಾನೆ ಎಂದು. ಮತ್ತೆ ಒಂದು ವಾರ ಕಳೆದ ನಂತರ ಆ ಹಾಲು ಮಾರುವವನು ತುಪ್ಪವನ್ನು ಮಾರಲು ಬಂದ. ಆಗ ಮಾಲೀಕ ಹೇಳಿದ ನನ್ನ ಅಂಗಡಿಗೆ ಇನ್ನು ಮುಂದೆ ನೀನು ಕಾಲಿಡಬೇಡ,ನೀನೊಬ್ಬ ಮೊಸಗಾರ, ನಂಬಿಕೆ ದ್ರೋಹಿ. ತುಪ್ಪ 1kg ಎಂದು 900gm ಕೊಡುತಿಯ ಪುನ, ನಿನ್ನ ಜೊತೆ ನಾನು ವ್ಯವಹಾರ ಮಾಡಿ...

"ಪ್ರಭಾಕರ್ ಮೈ ಮುಟ್ಟಿದರೆ ಜಾಗ್ರತೆ..." ಸವಾಲೆಸೆದ ಅಮಾಯಕ ಬಶೀರ್ ಇನ್ನಿಲ್ಲ

________________________________ 1993 ರಲ್ಲಿ ದ.ಕ.ಜಿಲ್ಲೆ ಕೋಮು ದಳ್ಳುರಿಗೆ ಸಿಲುಕಿತ್ತು. ಸೌದಿ ಅರೇಬಿಯಾಕ್ಕೂ ಇದರ ಬಿಸಿ ತಾಗಿತ್ತು. ಕೆಲ ಮುಸ್ಲಿಮರು ಆ ಸಮಯದಲ್ಲಿ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರಿನ ಪ್ರಭಾಕರ್ ಮೇಲೆ ದಾಳಿಗೆ ಮುಂದಾದರು. ಆಗ ಪ್ರಭಾಕರ್ ಗೆ ರಕ್ಷಣೆ ನೀಡಿ "ಪ್ರಭಾಕರ್ ನಮ್ಮವನು. ಅವನ ಮೈ ಮುಟ್ಟಿದರೆ ಜಾಗ್ರತೆ..." ಎಂದು ಹೇಳಿ ರಕ್ಷಿಸಿದವರು ಮತ್ಯಾರೂ ಅಲ್ಲ. ಕೊಟ್ಟಾರ ಚೌಕಿಯಲ್ಲಿ ಧರ್ಮಾಂಧರ ಮಚ್ಚಿನೇಟಿಗೆ ಸಿಲುಕಿ ಇಂದು ಆಸ್ಪತ್ರೆಯಲ್ಲಿ ನಿಧನರಾದ ಇದೇ ಬಶೀರ್. ಮಂಗಳೂರಿನ ಆಕಾಶಭವನದ ಜನರಿಗೆ ಬಶೀರ್ ಎಂದರೆ ತುಂಬಾ ಪ್ರೀತಿ. ಬಶೀರ್ ತನ್ನೂರಿನ ಪರೋಪಕಾರಿ. ಹಿಂದೂ, ಮುಸ್ಲಿಮ್ ಎನ್ನದೆ ಎಲ್ಲರೊಂದಿಗೆ ಬೆರೆಯುವವರು. ಸೌದಿಯಲ್ಲಿದ್ದಾಗ ಪ್ರಭಾಕರ್ ಮತ್ತು ಬಶೀರ್ ಒಂದೇ ತಟ್ಟೆಯಲ್ಲಿ ಉಂಡವರು. ಪ್ರಭಾಕರ್ ಕುಟುಂಬ ಊರಲ್ಲಿ ಸಂಕಷ್ಟದಲ್ಲಿದ್ದಾಗ ಅವರ ತಾಯಿ ಚಿಕಿತ್ಸೆಗೆ ಬಶೀರ್ ಎಷ್ಟೋ ಬಾರಿ ಆರ್ಥಿಕ ಸಹಾಯ ಚಾಚಿದ್ದಾರೆ. ಧರ್ಮ, ಜಾತಿ ನೋಡದೆ ಯಾರೇ ಸಹಾಯ ಯಾಚಿಸಿದರೂ ಬಶೀರ್ ಇಲ್ಲ ಎಂದವರಲ್ಲ. ಧರ್ಮ ಮೀರಿ ನಿಂತ ಈ ಹಸನ್ಮುಖಿ ಬಶೀರ್ ಗೆ ಎಂಥಾ ಶಿಕ್ಷೆ? ಕಾಟಿಪಳ್ಳ ದೀಪಕ್ ಕೊಲೆಗೆ ಪ್ರತೀಕಾರವಾಗಿ ಅದೇ ದಿನ ರಾತ್ರಿ ಕೊಟ್ಟಾರಚೌಕಿಯಲ್ಲಿ ಅಮಾಯಕ ಆಕಾಶಭವನದ ಬಶೀರ್ ಗೆ ಮತಾಂಧರು ಗಂಭೀರವಾಗಿ ಹಲ್ಲೆ ಮಾಡಿದ್ದರು. ಜೀವನ್ಮರಣ ಹೋರಾಟದಲ್ಲಿದ್ದ ಬಶೀರ್ ಇಂದು ದೇವರ ಅನುಲ್ಲಂಘನೀಯ ವಿಧಿಗ...